ವಾರಣವದನ... Varana vadana in Kannada
ಗಣಪತಿ ಕೀರ್ತನೆ
ರಾಗ - ಶಂಕರಾಭರಣ, ಆದಿ ತಾಳ
ವಾರಣವದನ । ತ್ರೈಲೋಕ್ಯ । ಸುಮೋಹನ ।। ವಾರಣ ।। ಪ ।।
ವಾರಣಾಸ್ಯ ವರದಾಯಕ ಸನ್ನುತ ।
ನಾರದಾದಿಮುನಿವಂದಿತಪದಯುಗ ।। ವಾರಣ ।। ।। ಅ ।।
ಸುಂದರಾಂಗ ಸುಕಲಾನ್ವಿತ ಶುಭಚರಣ । ಕಟಿಶೋಭಿತ ವ್ಯಾಳಸು ।
ಬಂಧನಾಬ್ಜಸಖಕೋಟಿಸದೃಶಕಿರಣ ।।
ಚಂದನಾಂಗಚರ್ಚಿತ ಸುಮನೋಹರ ।
ಮಂದಹಾಸ ಮಹಿಮಾಂಬುಧಿ ಶುಭಕರ ।। ವಾರಣ ।। ।।೧।।
ಕಂಬುಗ್ರೀವ ಕಮನೀಯಕರಾಂಬುರುಹ । ಪಾಶಾಂಕುಶಧರ ವರ ।
ಶಂಬರಾರಿವಿಧುತನಯ ಮಧುರಗೇಹ ।।
ಜಂಭವೈರಿವಿನುತಾಮರವಂದಿತ ।
ಲಂಬೋದರ ವಿಘ್ನಾಂಬುಧಿಕುಂಭಜ ।। ವಾರಣ ।। ।। ೨।।
ಚಾರು ಬಾರಕನ್ಯಾಪುರವರನಿಲಯ । ಮೃಕಂಡುಜ ಋಷಿವರ ।
ಸಾರಮಂತ್ರಸ್ಥಾಪಿತ ಮಂಗಲಕಲಯ ।।
ಸಾರ ಕಪಿತ್ಥ ಫಲೋರಸಭುಂಜಕ ।
ಧೀರ ಲಕ್ಷ್ಮೀ ನಾರಾಯಣ ಸಖಸುತ ।। ವಾರಣ ।। ।।೩।।
ವಾರಣ=ಆನೆ, ಸನ್ನುತ=ಚೆನ್ನಾಗಿ ಹೊಗಳಿದ, ಕಟಿ=ಸೊಂಟ, ವ್ಯಾಲ(ವ್ಯಾಳಸು)=ಹಾವು, ಕಂಬು=ಶಂಖ, ಗ್ರೀವ=ಕತ್ತು, ಅಂಬುಧಿ=ಸಮುದ್ರ, ಚಾರು=ಮನೋಹರ, ಕಪಿತ್ಥ = ಬೇಲದ ಹಣ್ಣು
ಯಕ್ಷಗಾನ ಸಭಾಲಕ್ಷಣದಲ್ಲಿರುವ ಈ ಗಣಪತಿ ಕೀರ್ತನೆ, ಯಕ್ಷಗಾನ ಪ್ರದರ್ಶನದ ಪ್ರಾರಂಭದಲ್ಲಿ ಹಾಡುವ ಒಂದು ಜನಪ್ರಿಯ ಪದ್ಯ.
Varana vadana ganapati keertane in Kannada from Yakshagana Sabha lakshana
No comments:
Post a Comment